ಸುಳ್ಯ, ಮಾ.೧೩: ಈಗಾಗಲೇ ಅಡಿಕೆಗೆ ನೀಡು ತ್ತಿರುವ ಬೆಂಬಲ ಬೆಲೆ ಬೆಳೆಗಾರರಿಗೆ ಸಮರ್ಪ ಕವಾಗಿ ಸಿಗುತ್ತಿಲ್ಲ ಮತ್ತು ಸಿಗುವ ಬೆಂಬಲ ಬೆಲೆಯೂ ಸಾಲದು ಎಂದು ಆರೋಪಿಸಿ ರುವ ರೈತರು ತಮ್ಮ ಬೇಡಿಕೆಗಳ ಈಡೇರಿಕೆಗೆ ಹೋರಾಟದ ಹಾದಿ ಹಿಡಿದಿದ್ದಾರೆ.
ಶನಿವಾರ ಸುಳ್ಯ ಟಿಎಪಿಸಿಎಂಎಸ್ ಸಭಾಂಗಣದಲ್ಲಿ ನಡೆದ ರಾಜಕೀಯ ಧುರೀಣರು, ರೈತ ಮುಖಂಡರು ಮತ್ತು ಅಡಿಕೆ ಬೆಳೆಗಾರರ ಸಭೆಯಲ್ಲಿ ಈ ಕುರಿತು ನಿರ್ಧಾರ ತೆಗೆದುಕೊಳ್ಳಲಾಯಿತು. ಈ ಸಂದರ್ಭ ಅಡಿಕೆ ಬೆಳೆಗಾರರ ಹಿತರಕ್ಷಣಾ ವೇದಿಕೆ ರಚಿಸಲಾಯಿತು.
ಮಾ.೨೯ರಂದು ಪುತ್ತೂರಿನಲ್ಲಿ ಹಕ್ಕೊತ್ತಾಯ ಮಂಡನೆಗೆ ನಡೆಯಲಿರುವ ಬೃಹತ್ ಪ್ರತಿ ಭಟನೆಯಲ್ಲಿ ಸುಳ್ಯದಿಂದ ಸಾವಿರಾರು ರೈತರನ್ನು ಸಂಘಟಿಸಿ ಭಾಗವಹಿಸುವುದೆಂದು ನಿರ್ಧರಿಸಲಾಯಿತು.
ಕ್ಯಾಂಪ್ಕೊ ವಿರುದ್ಧ ಆಕ್ರೋಶ: ಸಭೆ ಯಲ್ಲಿ ಮಾತನಾಡಿದ ಪುತ್ತೂರು ಸ್ವಾಭಿಮಾನಿ ವೇದಿಕೆಯ ಮುಖಂಡ ಅಣ್ಣಾ ವಿನಯಚಂದ್ರ, ಅಡಿಕೆಧಾರಣೆ ದಿನೆ ದಿನೇ ಕಡಿಮೆಯಾಗು ತ್ತಿದೆ. ಬೆಳೆಗಾರರ ಹಿತರಕ್ಷಣೆಗಾಗಿಯೇ ಆರಂಭಗೊಂಡಿದ್ದ ಕ್ಯಾಂಪ್ಕೊ ಮಾರವಾಡಿ ಗಳ ಕೈಗೊಂಬೆಯಾಗಿದೆ ಎಂದು ಆರೋ ಪಿಸಿದರು.
ವಾಸ್ತವವಾಗಿ ಅಡಿಕೆಗೆ ಬೆಂಬಲ ಬೆಲೆ ನೀಡ ಲಾಗುವುದಿಲ್ಲ. ಏಕೆಂದರೆ ಅದು ಆಹಾರ ಧ್ಯಾನ ವಲ್ಲ. ಹಾಗಾಗಿ ಮಾರುಕಟ್ಟೆ ಮಧ್ಯ ಪ್ರವೇಶ ಯೋಜನೆ ಇದೆ. ಈ ಯೋಜನೆ ಯಂತೆ ಅಡಿಕೆ ಖರೀದಿಗೆ ಸರಕಾರ ಕ್ಯಾಂಪ್ಕೊ ಮತ್ತು ಮಾಸ್ ಎರಡೂ ಸಂಸ್ಥೆಗಳಿಗೆ ಅವಕಾಶ ಮಾಡಿ ಕೊಡಬೇಕು ಎಂದ ಅವರು, ಈ ಕುರಿತಂತೆ ಮುಖ್ಯಮಂತ್ರಿಗೆ ತಪ್ಪು ಮಾಹಿತಿ ಹೋಗಿದೆ. ಇದನ್ನು ಸರಿಪಡಿಸಲು ನಿಯೋಗ ಹೋಗ ಬೇಕು ಮತ್ತು ಸರಕಾರದ ಮೇಲೆ ಒತ್ತಡ ಹೇರುವ ಸಲುವಾಗಿ ಚಳವಳಿ ರೂಪು ಗೊಳ್ಳಬೇಕು ಎಂದು ಅಣ್ಣಾ ನುಡಿದರು.
ಕ್ಯಾಂಪ್ಕೊ ಬೆಂಬಲ ಬೆಲೆ ನೀಡುವಲ್ಲಿ ತಾರತಮ್ಯ ನೀತಿ ಅನುಸರಿಸುತ್ತಿದೆ. ಸುಳ್ಯ ತಾಲೂಕಿನಲ್ಲಿ ಕೇವಲ ೧ ಶಾಖೆಯಲ್ಲಿ ಮಾತ್ರ ಬೆಂಬಲ ಬೆಲೆ ಖರೀದಿ ವ್ಯವಸ್ಥೆ ಮಾಡಿ ರೈತರಿಗೆ ಅನ್ಯಾಯ ಮಾಡಿದೆ ಎಂದು ಕಾಂಗ್ರೆಸ್ ಮುಖಂಡ ಎಂ.ವೆಂಕಪ್ಪ ಗೌಡ ಆರೋಪಿಸಿದರು.
ಜೆಡಿಎಸ್ ಜಿಲ್ಲಾಧ್ಯಕ್ಷ ಎಂ.ಬಿ.ಸದಾಶಿವ, ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ನಿತ್ಯಾನಂದ ಮುಂಡೋಡಿ, ಎಂ.ಡಿ.ವಿಜಯಕುಮಾರ್, ಚಂದ್ರಶೇಖರ ಕಾಮತ್, ಎಂ.ಎ.ಉಮೇಶ್, ಬೈನ್ಕಜೆ ರಾಮಚಂದ್ರ, ರಾಬರ್ಟ್ ಡಿಸೋಜ, ಶ್ರೀರಾಮ ಪಾಟಾಜೆ, ಅಮಲ ರಾಮಚಂದ್ರ, ಜಯಪ್ರಕಾಶ್ ಮರ್ಕಂಜ, ಬೀರಾ ಮೊಯ್ದೀನ್, ಅಶೋಕ್ ಚೂಂತಾರು, ದಿನೇಶ್ ಮಡಪ್ಪಾಡಿ ಮತ್ತಿತರರು ಸಲಹೆ ಸೂಚನೆಗಳನ್ನಿತ್ತರು.
ಕೇಂದ್ರ, ರಾಜ್ಯ ಸರಕಾರಕ್ಕೆ ನಿಯೋಗ ಕೊಂಡೊ ಯ್ಯುವುದು ಸೇರಿದಂತೆ ರಾಜ ತಾಂತ್ರಿಕ ಹಾದಿ ಮತ್ತು ಜಿಲ್ಲೆಯಲ್ಲಿ ಪ್ರತಿಭಟನೆಯ ಮೂಲಕ ಬೇಡಿಕೆಗಳ ಈಡೇರಿಕೆಗೆ ಶ್ರಮಿಸಲು ನಿರ್ಧರಿಸ ಲಾಯಿತು. ಅಡಿಕೆ ಬೆಳೆಗಾರರ ಹಿತರಕ್ಷಣಾ ವೇದಿಕೆಯ ಅಧ್ಯಕ್ಷರಾಗಿ ಎಂ.ಪಿ.ಉಮೇಶ್ ಮತ್ತು ಪ್ರಧಾನ ಕಾರ್ಯದರ್ಶಿಯಾಗಿ ಎಂ.ಡಿ. ವಿಜಯಕುಮಾರ್ ಆಯ್ಕೆಗೊಂಡರು.
ಸಿಪಿಸಿಆರ್ಐ ಬೆಲೆ: ಸತ್ಯ ಏನು?
ಸಿಪಿಸಿಆರ್ಐ ವೈಜ್ಞಾನಿಕ ಅಧ್ಯಯನದ ಪ್ರಕಾರ ನಿಗದಿಪಡಿಸಿದ ಧಾರಣೆಯಂತೆ ಅಡಿಕೆಗೆ ಬೆಂಬಲ ಬೆಲೆ ನೀಡಲಾಗಿದೆ ಎಂದು ಜನಪ್ರತಿನಿಧಿಗಳು, ಕ್ಯಾಂಪ್ಕೊದವರು ಹೇಳುತ್ತಿದ್ದಾರೆ. ಆದರೆ ಸಿಪಿಸಿಆರ್ಐ ನಮಗೆ ತಿಳಿಸಿದಂತೆ, ಅವರು ಅಧ್ಯಯನ ನಡೆಸಿರುವುದು ನಿಗದಿತ ಪ್ರದೇಶ ವ್ಯಾಪ್ತಿಯಲ್ಲಿ ಮಾತ್ರ. ಅಲ್ಲದೆ ಅಧ್ಯಯನ ನಡೆಸಿ ವರದಿ ಸಲ್ಲಿಸುವಂತೆ ಸರಕಾರ ವೇನೂ ಸಿಪಿಸಿಆರ್ಗೆ ಸೂಚಿಸಿಲ್ಲ ಎಂದು ಅಣ್ಣಾ ವಿನಯಚಂದ್ರ ತಿಳಿಸಿದರು.
ಸಿಪಿಸಿಆರ್ಐ ವರದಿಯಲ್ಲಿ ಅಡಿಕೆಯ ರಕ್ಷಣೆ, ನಿರ್ವಹಣೆ ಮುಂತಾದ ವೆಚ್ಚಗಳು ಸೇರಿಲ್ಲ. ಇವೆಲ್ಲ ಸೇರಿದರೆ ಅಡಿಕೆಗೆ ಕೆ.ಜಿ.ವೊಂದಕ್ಕೆ ೯೦ರಿಂದ ೧೦೦ ರೂ. ಸಿಗಬೇಕು ಎಂದು ಸಿಪಿಸಿಆರ್ಐನವರೇ ಹೇಳುತ್ತಾರೆ ಎಂದು ಅವರು ಸಭೆಯಲ್ಲಿ ಬಹಿರಂಗಪಡಿಸಿದರು.